ಪುಟ್ಟ ಕಂದಮ್ಮನ ಜೀವ ಉಳಿಸಲು ಪ್ಲಾಸ್ಟಿಕ್ ಟಬ್ನಲ್ಲಿ ಮಗುವಿಟ್ಟುಕೊಂಡು ನೀರಿಗಿಳಿದ ಪಿಎಸ್ಐ! - ಮಗುವಿನ ಜೀವ ಉಳಿಸಲು ಪ್ಲಾಸ್ಟಿಕ್ ಟಬ್
ಕಳೆದ ಕೆಲ ದಿನಗಳಿಂದ ಗುಜರಾತ್ನ ಅನೇಕ ಪ್ರದೇಶಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಇದರಿಂದ ರಸ್ತೆಗಳೆಲ್ಲ ನದಿಗಳಂತೆ ಕಾಣುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ಪಿಎಸ್ಐ ಗೋವಿಂದ್ ಚವ್ಹಾಣ್ ಎರಡು ವರ್ಷದ ಮಗುವಿನ ಜೀವ ಉಳಿಸಲು ಪ್ಲಾಸ್ಟಿಕ್ ಟಬ್ನಲ್ಲಿ ಅದನ್ನಿಟ್ಟು ತಲೆ ಮೇಲೆ ಹೊತ್ತು ನೀರಿಗಿಳಿದಿದ್ದಾರೆ.