ಕರ್ನಾಟಕ

karnataka

ETV Bharat / videos

ದೇವರನಾಡಲ್ಲಿ ವರುಣನಾರ್ಭಟ, ಡ್ಯಾಂಗಳ ಕ್ರಸ್ಟ್​ ಗೇಟ್​ ಓಪನ್​: ನದಿಪಾತ್ರಗಳಲ್ಲಿ ಹೈ ಅಲರ್ಟ್ - ಇಡುಕ್ಕಿ ಡ್ಯಾಂ ಗೇಟ್​ಗಳು ಓಪನ್​

By

Published : Oct 19, 2021, 7:25 PM IST

ಕೇರಳದಲ್ಲಿ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಇಡುಕ್ಕಿ ಅಣೆಕಟ್ಟುಗಳ ಕ್ರಸ್ಟ್​​ ಗೇಟ್​​ಗಳನ್ನು ತೆರೆಯಲಾಯಿತು. ನೀರಿನ ಮಟ್ಟವನ್ನು ನಿಯಂತ್ರಿಸುವ ಸಲುವಾಗಿ ಇಡುಕ್ಕಿ ಅಣೆಕಟ್ಟಿನ ಭಾಗವಾಗಿರುವ ಚೆರುತೋಣಿ ಅಣೆಕಟ್ಟಿನ ಗೇಟನ್ನು ಸಹ ತೆರೆಯಲಾಗಿದೆ. ಡ್ಯಾಂನಿಂದ ಬಿಟ್ಟಿರುವ ನೀರು ಪ್ರವಾಹ ಪೀಡಿತ ಪ್ರದೇಶಗಳಾದ ಅಲುವಾ ಮತ್ತು ಕಾಲಡಿಯನ್ನು ತಲುಪುವ ನಿರೀಕ್ಷೆಯಿರುವುದರಿಂದ ಪೆರಿಯಾರ್ ನದಿಪಾತ್ರಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಇಡಮಲಯಾರ್ ಮತ್ತು ಪಂಬಾ ಅಣೆಕಟ್ಟುಗಳನ್ನು ಕೂಡ ತೆರೆಯಲಾಗಿದೆ. ಡ್ಯಾಂಗಳಿಂದ ನೀರನ್ನು ಹೊರಬಿಡುತ್ತಿರುವ ಹಿನ್ನೆಲೆ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ.

ABOUT THE AUTHOR

...view details