ಸೀರೆಯಲ್ಲಿ ನೀರೆಯ ಜಿಮ್ನಾಸ್ಟಿಕ್ಸ್ ವಿಡಿಯೋ ಸಖತ್ ವೈರಲ್..ನೀವು ನೋಡಿ - ಸೀರೆಯಲ್ಲಿ ಯುವತಿ ಜಿಮ್ನಾಸ್ಟಿಕ್ಸ್ ವಿಡಿಯೋ ಸಖತ್ ವೈರಲ್
ಸೀರೆಯಲ್ಲಿ ಯುವತಿಯೊಬ್ಬಳು ಜಿಮ್ನಾಸ್ಟಿಕ್ಸ್ ಮಾಡುವ ಮೂಲಕ ಎಲ್ಲರನ್ನೂ ಹುಬ್ಬೆರುವಂತೆ ಮಾಡಿದ್ದಾಳೆ. ಸೀರೆಯಲ್ಲಿ ಯುವತಿ ಜಿಮ್ನಾಸ್ಟಿಕ್ಸ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಅನೇಕರು ಬೆರಗಾಗಿದ್ದಾರೆ. ರಾಷ್ಟ್ರೀಯ ಚಿನ್ನದ ಪದಕ ವಿಜೇತ ಜಿಮ್ನಾಸ್ಟ್ ಪರುಲ್ ಅರೋರಾ ಸೀರೆಯನ್ನು ಧರಿಸಿ ಫ್ಲಿಪ್ ಅನ್ನು ಸಲೀಸಾಗಿ ಪ್ರದರ್ಶಿಸಿದ್ದಾರೆ. ಸೀರೆಯಲ್ಲಿ ಫ್ಲಿಪ್ ಮಾಡುವ ಆಲೋಚನೆಯನ್ನು ಅವರ ಸ್ನೇಹಿತರೊಬ್ಬರು ನೀಡಿದ್ದಾರಂತೆ, ಅದರಂತೆ ಫ್ಲಿಪ್ ಮಾಡಿದೆ ಎನ್ನುತ್ತಾರೆ ಪರುಲ್ ಅರೋರಾ. ಇನ್ನೂ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಜನರು ಇದನ್ನು ಇಷ್ಟಪಟ್ಟಿದ್ದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಜಿಮ್ನಾಸ್ಟ್ ಪರುಲ್ ಅರೋರಾ ಸಂತಸ ಹಂಚಿಕೊಂಡಿದ್ದಾರೆ.