ಖಾಸ್‌ದಾರ್ ವೇದಿಕೆಯಲ್ಲಿ ಶಾನ್‌ದಾರ್ ಬ್ಯಾಟಿಂಗ್! ಕೇಂದ್ರ ಸಚಿವರ ಬೌಲಿಂಗ್ಗೆ ಹಾರ್ದಿಕ್ ಸಿಕ್ಸರ್! ವಿಡಿಯೋ - Hardik Pandya played cricket with political leader,
ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ವೇದಿಕೆಯಲ್ಲೇ ಕ್ರಿಕೆಟ್ ಆಡಿ ಗಮನ ಸೆಳೆದರು. ನಾಗ್ಪುರದಲ್ಲಿ ನಡೆಯುತ್ತಿರುವ ‘ಖಾಸ್‌ದಾರ್ ಕ್ರೀಡಾ ಮಹೋತ್ಸವ’ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ಹಾಗು ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಕ್ರಿಕೆಟ್ ಆಡಿದ್ದು, ಕೇಂದ್ರ ಸಚಿವರ ಬೌಲಿಂಗ್ಗೆ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಇದಾದ ಬಳಿಕ ಕ್ರೀಡಾಭಿಮಾನಿಗಳು ಹಾರ್ದಿಕ್ ಪಾಂಡ್ಯ ಸೆಲ್ಫಿಗೆ ಮುಗಿಬಿದ್ದರು.