ಟ್ರಂಪ್ ಮಗಳೊಂದಿಗೆ ಸೆಲ್ಫಿಗೆ ಮುಗಿಬಿದ್ದ ಜನ... 'ನಮಸ್ತೆ ಟ್ರಂಪ್' ಸೂಪರ್ ಎಂದ ಇವಾಂಕಾ! - ಡೊನಾಲ್ಡ್ ಟ್ರಂಪ್ 2020
ಅಹ್ಮದಾಬಾದ್: ಎರಡು ದಿನಗಳ ಭಾರತದ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಅವರ ಮಗಳು ಇವಾಂಕಾ ಸಹ ಆಗಮಿಸಿದ್ದಾರೆ. ಮೊಟೆರಾದ ಕ್ರಿಕೆಟ್ ಮೈದಾನದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾದ ಟ್ರಂಪ್ ಮಗಳು ವೇದಿಕೆಯಿಂದ ಕಳೆಗೆ ಇಳಿಯುತ್ತಿದ್ದಂತೆ ನೆರೆದಿದ್ದ ಜನರು ಸೆಲ್ಫಿತೆಗೆದುಕೊಳ್ಳಲು ಮುಗಿಬಿದ್ದರು. ಇದೇ ವೇಳೆ, ನಮಸ್ತೆ ಟ್ರಂಪ್ ಕಾರ್ಯಕ್ರಮ ಸೂಪರ್ ಎಂದು ಇವಾಂಕಾ ಹೊಗಳಿದರು.