ಭಾರತೀಯರನ್ನ ಮೂರ್ಖರನ್ನಾಗಿಸಲು ಚೀನಾ ಆ್ಯಪ್ ಬ್ಯಾನ್: ಕೇಂದ್ರದ ವಿರುದ್ಧ ಗ್ರೇಟ್ ಕಲಿ ವಾಗ್ದಾಳಿ! - ಕುಸ್ತಿಪಟು ಗ್ರೇಟ್ ಕಲಿ
ಜಲಂಧರ್(ಪಂಜಾಬ್): ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿರುವುದರಿಂದ ಭಾರತೀಯರಿಗೆ ಯಾವ ಲಾಭವಿದೆ ಎಂದು ಪ್ರಶ್ನೆ ಮಾಡಿರುವ ಗ್ರೇಟ್ ಕಲಿ, ಈ ನಿರ್ಧಾರ ತೆಗೆದುಕೊಂಡು ಕೇಂದ್ರ ಸರ್ಕಾರ ಹಿಂದೂಸ್ತಾನದ ಜನರನ್ನು ಮೂರ್ಖರನ್ನಾಗಿ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದರು. ನಿಜವಾಗಲೂ ಎದುರೇಟು ನೀಡುವುದಾದರೆ ಚೀನಾ ವಸ್ತುಗಳ ಮೇಲೆ ನಿರ್ಬಂಧ ಹಾಕಿ. ದೇಶದಲ್ಲಿ ಎಲ್ಲಿ ನೋಡಿದ್ರೂ ಅವರ ಉತ್ಪನ್ನಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಮೇಲೆ ಮೊದಲು ಬಹಿಷ್ಕಾರ ಹಾಕಿ ಎಂದು ಆಗ್ರಹಿಸಿದ್ದಾರೆ.