ಇಂಧನ ಬೆಲೆ ಏರಿಸಿ ಕೇಂದ್ರದಿಂದ ಜನರ ಸುಲಿಗೆ: ಸೋನಿಯಾ ವಾಗ್ದಾಳಿ - ಕೇಂದ್ರದ ವಿರುದ್ಧ ವಾಗ್ದಾಳಿ
ನವದೆಹಲಿ: ದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಂಧನ ಬೆಲೆ ಏರಿಕೆಯಾಗ್ತಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಐಎಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿದ್ದು, ಮಾರ್ಚ್ 25ರಿಂದ ಇಲ್ಲಿಯವರೆಗೆ ದೇಶದಲ್ಲಿ 22 ಸಲ ತೈಲ ಬೆಲೆ ಏರಿಕೆ ಮಾಡಲಾಗಿದೆ. ಇಂಧನ ಬೆಲೆ ಏರಿಕೆ ಮಾಡಿ ಕೇಂದ್ರದಿಂದ ಜನರ ಸುಲಿಗೆ ಮಾಡಲಾಗುತ್ತಿದ್ದು, ತನ್ನ ಖಜಾನೆ ತುಂಬಿಸಿಕೊಳ್ಳಲು ಸಾರ್ಜನಿರ ಸುಲಿಗೆ ಮಾಡಲು ಶುರು ಮಾಡಿದೆ ಎಂದಿದ್ದಾರೆ. ದೇಶದ ಅನೇಕ ನಗರಗಳಲ್ಲಿ ತೈಲ ಬೆಲೆ ಈಗಾಗಲೇ 80 ರೂ. ಆಗಿದ್ದು, ಕೇಂದ್ರ ತಕ್ಷಣವೇ ಬೆಲೆ ಇಳಿಕೆ ಮಾಡಬೇಕು ಎಂದಿದ್ದಾರೆ.