ಸೈಕಲ್ನಲ್ಲಿ ಕಾಣಿಸಿಕೊಂಡ ಬೆಂಕಿ; ಸುಟ್ಟು ಕರಕಲಾದ ವಿಕಲಚೇತನ ಮಹಿಳೆ..! - ಆಂಧ್ರಪ್ರದೇಶದ ಇಂದಿನ ಸುದ್ದಿಗಳು
ತ್ರಿಚಕ್ರ ಸೈಕಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಿಕಲಚೇತನೆಯೊಬ್ಬಳು ಸುಟ್ಟು ಭಸ್ಮಗೊಂಡ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಭುವನೇಶ್ವರಿ ಜೀವಂತ ಸುಟ್ಟು ಭಸ್ಮವಾದ ವಿಕಲಚೇತನೆ ಎಂದು ತಿಳಿದು ಬಂದಿದೆ. ಸೈಕಲ್ನಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಬೆಂಕಿಯ ಕೆನ್ನಾಲಿಗೆ ಅವಳನ್ನು ಜೀವಂತ ಸುಟ್ಟಿದೆ. ಘಟನೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.