ಲಾಕ್ಡೌನ್ ನಡುವೆಯೇ ಹೀಗೊಂದು ಶವಯಾತ್ರೆ... ಇದಕ್ಕೆಲ್ಲ ಅವಕಾಶ ಕೊಟ್ಟಿದ್ಯಾರು? - ಉತ್ತರ ಪ್ರದೇಶದ ಜೌನ್‌ಪುರ
ಮನುಷ್ಯ ಸತ್ತರೆ ಇಂತಿಷ್ಟೇ ಜನ ಅಂತಿಮ ಕ್ರಿಯೆಯಲ್ಲಿ ಇರಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಇಲ್ಲಿನ ಜನಕ್ಕೆ ಅದ್ಯಾವುದರ ಗೊಡವೆನೇ ಇಲ್ಲದೇ ಕೋತಿಯ ಶವಯಾತ್ರೆ ಮಾಡಿದ್ದಾರೆ. ಉತ್ತರ ಪ್ರದೇಶದ ಜೌನ್‌ಪುರದ ಪವಾರ್ ಕಿಸ್ ಸರಾಯ್ ಬಿಕಾ ಬಜಾರ್‌ನಲ್ಲಿ ವಿದ್ಯುತ್ ತಂತಿಗಳಿಗೆ ಸಿಲುಕಿ ಕೋತಿಯೊಂದು ಮೃತಪಟ್ಟಿತ್ತು. ಜನರು ಧಾರ್ಮಿಕ ಮನೋಭಾವದಿಂದ ಕೋತಿ ಅಂತ್ಯಕ್ರಿಯೆಯ ಮೆರವಣಿಗೆ ನಡೆಸಿದರು. ಇನ್ನು ಈ ಶವಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು ಅನ್ನೋದು ವಿಶೇಷ. ಇನ್ನೊಂದು ಆತಂಕದ ವಿಷಯ ಎಂದರೆ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳದೇ ಜನ ಪಾಲ್ಗೊಂಡಿದ್ದರು. ಬಜಾರ್ನ ಸುಮಾರು 100 ಅಂಗಡಿಗಳ ಮುಂದೆ ಈ ಶವಯಾತ್ರೆ ಹಾದು ಹೋಗಿತ್ತು. ಆದರೆ, ಈ ವಿಷಯವನ್ನು ಮುಖ್ಯ ಅಭಿವೃದ್ಧಿ ಅಧಿಕಾರಿ ಅನುಪಮ್ ಶುಕ್ಲಾ ಗಂಭೀರವಾಗಿ ಪರಿಗಣಿಸಿದ್ದಾರೆ. ಇಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಸಾಬೀತಾದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.