ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ಮಳೆ ಜೊತೆ ಹಿಮಪಾತದ ಆರ್ಭಟ.. ವಿಡಿಯೋ - ಹಿಮಪಾತದ ಆರ್ಭಟ
ಜಮ್ಮು ಕಾಶ್ಮೀರ ಕಣಿವೆಯಲ್ಲಿ, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಭಾನುವಾರ ಸಂಜೆಯಿಂದಲೇ ಮಳೆ ಬೀಳುತ್ತಿದ್ದು ಇತ್ತ ಮೇಲಿನ ಪ್ರದೇಶಗಳಲ್ಲಿ ಮಧ್ಯಂತರ ಹಿಮಪಾತವು ಮುಂದುವರೆದಿದೆ.ಇದರಿಂದಾಗಿ ಶೀತ ಸ್ವಲ್ಪ ಹೆಚ್ಚಾಗಿದೆ. ಮುಂದಿನ 24 ಗಂಟೆಗಳಲ್ಲಿ ಕಣಿವೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಣಿವೆಯ ಜನಪ್ರಿಯ ಪ್ರವಾಸಿ ತಾಣವಾದ ಗುಲ್‌ಮಾರ್ಗ್‌ನಲ್ಲಿ ಭಾನುವಾರದಿಂದ ಹಿಮಪಾತ ಮುಂದುವರಿಯಲಿದೆ.