ಬಿಜೆಪಿ ಕಾರ್ಯಕರ್ತರ ಕಾರು - ಬೈಕ್ ಮಧ್ಯೆ ಡಿಕ್ಕಿ, ನಾಲ್ವರ ದುರ್ಮರಣ! - ಗಿರಿಡಿಹ್ ರಸ್ತೆ ಅಪಘಾತ ಸುದ್ದಿ
ಜಾರ್ಖಂಡ್ನ ಗಿರಿಡಿಹ್ ಬಳಿ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಅರುಣ್ ಯಾದವ್, ಲಾಲೂ ಯಾದವ್, ರಾಜು ಯಾದವ್ ಹಾಗೂ ಬಬಲೂ ಯಾದವ್, ಪೆಟ್ರೋಲ್ ತರಲು ಬೈಕ್ನಲ್ಲಿ ತೆರಳಿದ್ದರು. ಎದುಗರಡೆಯಿಂದ ಬಂದ ಬಿಜೆಪಿ ಕಾರ್ಯಕರ್ತರ ಬೊಲೆರೊ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟರೇ, ಇನ್ನಿಬ್ಬರು ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೇ ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.