ಕಾಡಾನೆ ದಾಳಿಗೆ ನಾಲ್ವರು ಬಲಿ, ಮೂವರಿಗೆ ಗಾಯ... ಜೀವ ಭಯದಿಂದ ನೀರಿನ ಟ್ಯಾಂಕ್ ಏರಿದ ಜನ! - ಕಾಡಾನೆಗಳ ಹಾವಳಿ
ಭುವನೇಶ್ವರ್(ಒಡಿಶಾ): ಮನುಷ್ಯರು ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷಗಳು ಹೆಚ್ಚುತ್ತಲೇ ಇವೆ. ಇದಕ್ಕೊಂದು ಜ್ವಲಂತ ಉದಾಹರಣೆಯಂತಿದೆ ಒಡಿಶಾದಲ್ಲಿ ಕಾಡಾನೆಗಳು ನಾಲ್ವರನ್ನು ಬಲಿ ಪಡೆದಿರುವ ಘಟನೆ. ಗಜಪಡೆಯ ದಾಳಿಗೆ ಇಂದು ನಾಲ್ವರು ಸಾವನ್ನಪ್ಪಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆನೆಗಳ ಹಿಂಡು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು, ಜನರ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ಜನರು ನೀರಿನ ಟ್ಯಾಂಕ್ ಮೇಲೆ ಹತ್ತಿ ನಿಂತಿದ್ದ ದೃಶ್ಯ ಕಂಡು ಬಂದಿದೆ.