ಪಂಜರಕ್ಕೆ ಸೀಮಿತವಾದ ಗಿಣಿಗೆ ಹಾರಲು ತರಬೇತಿ; ಕೇರಳದಲ್ಲೊಂದು ಅಪರೂಪದ ಘಟನೆ
ಕೇರಳದ ತ್ರಿಶೂರ್ ಜಿಲ್ಲೆಯ ಪಾಲಪ್ಪಿಲ್ಲಿಯ ಮನೆಯೊಂದರಲ್ಲಿ ಅಕ್ರಮವಾಗಿ ಪಂಜರದಲ್ಲಿ ಅಲೆಕ್ಸಾಂಡ್ರಿಯನ್ ಪ್ಯಾರಾಕೀಟ್ ಎಂಬ ಪ್ರಭೇದಕ್ಕೆ ಸೇರಿದ ಗಿಳಿಯೊಂದನ್ನು ಸಾಕಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಪಂಜರಕ್ಕೆ ಸೀಮಿತಗೊಂಡಿದ್ದ ಹಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಆ ಗಿಳಿಗೆ ಪಂಜರದೊಳಗೇ ಇದ್ದು ಅಭ್ಯಾಸವಾದ ಕಾರಣ ಹಾರಾಟ ಮಾಡುವುದನ್ನೇ ಅದು ಮರೆತಿದೆ ಹಾಗೂ ಸ್ವತಃ ಆಹಾರ ಅರಸುವುದು ಕೂಡಾ ಅರಿವಿಲ್ಲದಾಗಿದೆ. ಹಾಗಾಗಿ ಗಿಳಿಯ ತರಬೇತಿಗಾಗಿ ಅರಣ್ಯ ಪಶುವೈದ್ಯರ ನೇತೃತ್ವದಲ್ಲಿ ಹಂತ ಹಂತವಾಗಿ ಹಾರಾಟ ಕಲಿಸುವ, ಆಹಾರ ಅರಸುವಂತಹ ತರಬೇತಿಯನ್ನು ನೀಡಲಾಗ್ತಿದೆಯಂತೆ.