ಗುಂಟಕಲ್ಲು ರೈಲ್ವೆ ಆಫೀಸ್ ಸುತ್ತಮುತ್ತಲ ಮರಗಳ ಮೇಲೆ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ - ಗುಂಟಕಲ್ಲು ರೈಲ್ವೆ ಅಧಿಕಾರಿಗಳಿಂದ ಸಮಾಜಮುಖಿ ಕಾರ್ಯ
ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕಾಗಿ ಪರಿತಪಿಸುವ ಪಕ್ಷಿಗಳ ಸಹಾಯಕ್ಕೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗುಂಟಕಲ್ಲು ರೈಲ್ವೆ ಅಧಿಕಾರಿಗಳು ನಿಂತಿದ್ದಾರೆ. ಗುಂಟಕಲ್ಲು ರೈಲ್ವೆ ಡಿಆರ್‌ಎಂ ಕಚೇರಿ ಬಳಿಯ ಮರಗಳಲ್ಲಿ ಪಕ್ಷಿಗಳಿಗೆಂದೇ ಆಹಾರ ಪೆಟ್ಟಿಗೆಗಳನ್ನು ಮಾಡಿ ಮರಗಳ ಕೊಂಬೆಗಳ ನಡುವೆ ನೇತು ಹಾಕಲಾಗಿದೆ. ಪಕ್ಷಿಗಳಿಗೆಂದೇ ನೀರು ಮತ್ತು ಕಾಳುಗಳನ್ನು ಆ ಪೆಟ್ಟಿಗೆಯಲ್ಲಿ ಇಡಲಾಗಿದೆ. ರೈಲ್ವೆ ಸ್ಕೌಟ್ಸ್ ಸ್ವಯಂಸೇವಕರು ಪಕ್ಷಿಗಳಿಗೆ ಆಹಾರ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆಹಾರಕ್ಕಾಗಿ ಮರಗಳ ಮೇಲೆ 25-30 ಆಹಾರ ಪೆಟ್ಟಿಗೆಗಳನ್ನು ಇಡಲಾಗಿದೆ. ರೈಲ್ವೆ ಸ್ಕೌಟ್ಸ್ ವಾರಕ್ಕೆ ಎರಡು ಬಾರಿ ಆಹಾರ ಮತ್ತು ನೀರನ್ನು ಆ ಪೆಟ್ಟಿಗೆಗಳಿಗೆ ತುಂಬಿಸುತ್ತದೆ. ಇಂತಹ ಕಾರ್ಯಗಳ ಮೂಲಕ ಪಕ್ಷಿಗಳ ಜೀವ ಉಳಿಸಲು ಪ್ರಯತ್ನಿಸಲಾಗುವುದು ಎಂದು ಡಿಆರ್‌ಎಂ ಅಲೋಕ್ ತಿವಾರಿ ತಿಳಿಸಿದ್ದಾರೆ.