ಪ್ರವಾಹಕ್ಕೆ ಸಿಲುಕಿ ಆಶ್ರಯ ಕಳೆದುಕೊಂಡ 95ಕ್ಕೂ ಅಧಿಕ ಕುಟುಂಬ
ದಿಬ್ರುಗರ್(ಅಸ್ಸೋಂ): ಇಲ್ಲಿನ ಮೋಲಾ ಮತ್ತು ಮಿರಿ ಗ್ರಾಮಗಳು ಬ್ರಹ್ಮಪುತ್ರ ನದಿಯಿಂದ ಉಂಟಾದ ಪ್ರವಾಹಕ್ಕೆ ತುತ್ತಾಗಿದ್ದು, 95ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಆಶ್ರಯವನ್ನು ಕಳೆದುಕೊಂಡಿವೆ. ಇನ್ನು ಮನೆ ಕಳೆದುಕೊಂಡವರಿಗೆ ತಮ್ಮ ಊರಿಗಿಂತ ಬಹು ದೂರದಲ್ಲಿ ಆಶ್ರಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, 95ಕ್ಕೂ ಹೆಚ್ಚು ಕುಟುಂಬಗಳನ್ನು ಒತ್ತಾಯ ಪೂರ್ವಕವಾಗಿ ಸ್ಥಳಾಂತರಿಸಿದ್ಧಾರೆ ಎನ್ನಲಾಗಿದೆ. ಅಸ್ಸೋಂ ರಾಜ್ಯದ 26 ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 26 ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ. 100ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಬಹಳಷ್ಟು ಕಡೆ ಭೂಕುಸಿತಗಳು ಸಂಭವಿಸಿವೆ.