ಆನೆಗಳಿಗೇ ಆಹಾರ ಒದಗಿಸುತ್ತಿರುವ ಪ್ರವಾಹ ಪೀಡಿತ ಜನರು - ಅಸ್ಸೋಂ ಪ್ರವಾಹ
ಅಸ್ಸೋಂ: ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನುಷ್ಯರಷ್ಟೇ ಅಲ್ಲ ಕಾಡು ಪ್ರಾಣಿಗಳು ಆಹಾರವಿಲ್ಲದೇ ವಿಲ ವಿಲ ಒದ್ದಾಡುತ್ತಿವೆ. ಪ್ರವಾಹದಿಂದಾಗಿ ಸಾವನ್ನಪ್ಪುತ್ತಿರುವ ಪ್ರಾಣಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮಜೂಲಿ ದ್ವೀಪದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾಡು ಪ್ರಾಣಿಗಳಿಗೆ ಪ್ರವಾಹ ಪೀಡಿತ ಜನತೆ ಆಹಾರ ಒದಗಿಸುತ್ತಿದ್ದಾರೆ. ಆನೆಗಳಿಗೆ ಸ್ಥಳೀಯರು ಆಹಾರ ನೀಡುತ್ತಿರುವ ಮತ್ತು ಆಹಾರ ಇಲ್ಲದೇ ಆನೆಗಳು ಸೊರಗಿರುವ ವಿಡಿಯೋ ಅಲ್ಲಿನ ಕರುಣಾಜನಕ ಪರಿಸ್ಥಿತಿಗೆ ಕೈಗನ್ನಡಿ ಆಗಿದೆ.