ಪುಟಾಣಿಯ ಪಿಗ್ಗಿ ಬ್ಯಾಂಕ್ನಿಂದ ಪಿಎಂ ಪರಿಹಾರ ನಿಧಿಗೆ 9 ಸಾವಿರ ರೂ..! ಬಾಲಕಿಯ ಅಣಿಮುತ್ತು ಹೀಗಿದೆ - ಕೊರೊನಾ ವಿರುದ್ಧದ ಹೋರಾಟ
ಗುಜರಾತ್: ಕೊರೊನಾ ವಿರುದ್ಧದ ಹೋರಾಟಕ್ಕೆ ಐದು ವರ್ಷದ ಬಾಲಕಿ ಮುಂದಾಗಿದ್ದು, ಪಿಗ್ಗಿ ಬ್ಯಾಂಕ್ನಲ್ಲಿ ತಾನು ಸಂಗ್ರಹಿಸಿದ್ದ 9 ಸಾವಿರ ರೂ. ಹಣವನ್ನು ಕೊವಿಡ್-19 ರೋಗಿಗಳ ಸಹಾಯಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾಳೆ. ನನ್ನ ಪಿಗ್ಗಿ ಬ್ಯಾಂಕ್ನಲ್ಲಿರುವ ಅಷ್ಟೂ ಹಣವನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ. ಈ ಹಣದಿಂದ ಸರ್ಕಾರ ಬಡವರಿಗೆ ಸಹಾಯ ಮಾಡಬಹುದು. ನೀವು ನನ್ನ ಹಾಗೆಯೇ ಸರ್ಕಾರಕ್ಕೆ ಸಹಾಯ ಮಾಡಿ, ಜೈ ಹಿಂದ್ ಎಂದು ಈ ಪೋರಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಾಲಕಿ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.