ಸೈಕಲ್, ಬೈಕ್ಗೆ ಗುದ್ದಿದ ಟ್ರಕ್... ಒಂದೇ ಕುಟುಂಬದ ನಾಲ್ವರು ಸೇರಿ ಐವರು ದುರ್ಮರಣ! - five person died,
ಟ್ರಕ್ ನಿಯಂತ್ರಣ ತಪ್ಪಿ ಬೈಕ್ ಮತ್ತು ಸೈಕಲ್ ಮೇಲೆ ಹರಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಕಾನ್ಪುರ್ನಲ್ಲಿ ನಡೆದಿದೆ. ವೇಗವಾಗಿ ಬಂದ ಲಾರಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಇಬ್ಬರು ಮಕ್ಕಳೊಂದಿಗೆ ಬೈಕ್ ಮೇಲೆ ತೆರಳುತ್ತಿದ್ದ ದಂಪತಿ ಮೇಲೆಯೂ ಹರಿದಿದೆ. ಈ ಅಪಘಾತದಲ್ಲಿ ಒಂದೇ ಕಟುಂಬದ ನಾಲ್ವರು ಸೇರಿದಂತೆ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಅಪಘಾತ ಬಳಿಕ ಡ್ರೈವರ್ ಮತ್ತು ಕ್ಲೀನರ್ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.