ಇಡುಕ್ಕಿಯಲ್ಲಿ ಭಾರೀ ಮಳೆ: ನದಿ ನೀರಲ್ಲಿ ಸಿಲುಕಿದ್ದ ವೃದ್ಧನ ರಕ್ಷಣೆ - ಕೇರಳದ ಇಡುಕ್ಕಿ
ಇಡುಕ್ಕಿ: ಕೇರಳದ ಇಡುಕ್ಕಿಯ ಕುಂಚಿತನ್ನಿಯಲ್ಲಿನ ಮುತಿರಪ್ಪುಳ ನದಿಯ ಸೇತುವೆಯಡಿ ಸಿಲುಕಿದ್ದ 70 ವರ್ಷದ ವೃದ್ಧನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಕೆಲ ದಿನಗಳ ಹಿಂದೆ ಮನೆಬಿಟ್ಟು ಬಂದಿದ್ದ ಅವರು ಪ್ರತಿನಿತ್ಯ ಸೇತುವೆಯ ಕೆಳಗಿರುವ ಕಟ್ಟೆಯ ಮೇಲೆ ಮಲಗುತ್ತಿದ್ದರು. ಆದರೆ ನಿನ್ನೆ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನದಿ ಉಕ್ಕಿ ಹರಿದಿದೆ. ವೃದ್ಧನನ್ನು ನೋಡಿದ ವ್ಯಕ್ತಿವೊಬ್ಬ ಸ್ಥಳೀಯರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಅವರನ್ನು ರಕ್ಷಿಸಿ, ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.