ವಿಡಿಯೋ: ಡಿವೈಡರ್ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟ್ರಕ್ ! - ಹರಿಯಾಣ ಅಗ್ನಿ ಅವಘಡ
ಕುರುಕ್ಷೇತ್ರ/ಹರಿಯಾಣ: ರಾಷ್ಟ್ರೀಯ ಹೆದ್ದಾರಿ ಜಿಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟ್ರಕ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಡಿವೈಡರ್ಗೆ ಡಿಕ್ಕಿ ಹೊಡೆದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್, ಟ್ರಕ್ ಚಾಲಕ ಸರಿಯಾದ ಸಮಯದಲ್ಲಿ ಟ್ರಕ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದು, ಬದುಕಿದೆಯಾ ಬಡ ಜೀವ ಎಂಬಂತೆ ನಿಟ್ಟುಸಿರು ಬಿಟ್ಟಿದ್ದಾನೆ. ಮೂಲಗಳ ಪ್ರಕಾರ, ಪೈಪ್‌ಗಳನ್ನು ಹೊತ್ತ ಟ್ರಕ್ ದೆಹಲಿಯಿಂದ ಚಂಡೀಗರ್ ಕಡೆಗೆ ಹೋಗುತ್ತಿತ್ತು. ಶರೀಫ್‌ಘರ್ ಗ್ರಾಮದ ಬಳಿ ಟ್ರಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಇನ್ನೂ ಟ್ರಕ್ ಚಾಲಕ ವಾಹನದಿಂದ ಹಾರಿ ತನ್ನ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಹಾಗೆ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
Last Updated : Apr 21, 2021, 7:29 PM IST