ಪೇಪರ್ ಗಿರಾಣಿ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ - ವಿಡಿಯೋ - ಏಷ್ಯಾದ ನಂಬರ್ ಒನ್ ಸ್ಟಾರ್ ಪೇಪರ್ ಗಿರಾಣಿ
ಸಹರಾನ್‌ಪುರ (ಉತ್ತರಪ್ರದೇಶ): ಸಹರಾನ್‌ಪುರದ ಸದರ್ ಬಜಾರ್ ಪ್ರದೇಶದಲ್ಲಿರುವ ಗೋಯೆಂಕಾ ಗ್ರೂಪ್‌ನ ಏಷ್ಯಾದ ನಂಬರ್ ಒನ್ ಸ್ಟಾರ್ ಪೇಪರ್ ಗಿರಾಣಿ ಗೋದಾಮಿನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಸರಕುಗಳು ಸುಟ್ಟು ಭಸ್ಮವಾಗಿವೆ. ಕೂಡಲೇ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.