ಅಗ್ನಿ ಅವಘಡ : 15ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ - ಅಹಮದಾಬಾದ್ನ ಷಾ ಬಾಪುನಗರದ ಶಾಹ್ ಸಿಖ್ ಕಾಂಪ್ಲೆಕ್ಸ್
ಅಹಮದಾಬಾದ್ನ ಷಾ ಬಾಪುನಗರದ ಶಾಹ್ ಸಿಖ್ ಕಾಂಪ್ಲೆಕ್ಸ್‌ನಲ್ಲಿ ಇಂದು ಮುಂಜಾನೆ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕಾಂಪ್ಲೆಕ್ಸ್ನಲ್ಲಿದ್ದ ಸುಮಾರು 15ಕ್ಕೂ ಹೆಚ್ಚು ಮಳಿಗೆಗಳು ಸುಟ್ಟಿವೆ. ಈ ಕಾಂಪ್ಲೆಕ್ಸ್‌ನಲ್ಲಿ ಮೊಬೈಲ್, ಚಿನ್ನ, ಬೆಳ್ಳಿ ಅಂಗಡಿಗಳು ಸೇರಿ ಇನ್ನಿತರ ಮಳಿಗೆಗಳಿದ್ದು, ಅಂಗಡಿಯೊಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಅಗ್ನಿ ಅವಘಡಕ್ಕ ನಿಖರ ಕಾರಣ ತಿಳುದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.