ಪವರ್ ಗ್ರೀಡ್‌ನಲ್ಲಿ ಬೆಂಕಿ... ಧಗ ಧಗಿಸಿದ ವಿದ್ಯುತ್ ಘಟಕ - ವಿಡಿಯೋ - ಅಸ್ಸೋಂನ ಚಮಗುರಿ
ಚಮಗುರಿ (ಅಸ್ಸೋಂ): ಚಮಗುರಿಯ ಪವರ್ ಗ್ರೀಡ್ ಸರ್ವೀಸ್ ಸ್ಟೇಷನ್‌ನಲ್ಲಿ ಹಮ್ಮಿಕೊಂಡಿದ್ದ ಬಿಸ್ವಕರ್ಮ ಪೂಜಾ ಕಾರ್ಯಕ್ರಮದ ವೇಳೆ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ವಿದ್ಯುತ್ ಪರಿವರ್ತಕ ಘಟಕ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆಗೆ ಬೃಹತ್ ಗಾತ್ರದ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಯತ್ನ ಮಾಡಿವೆ. ವಿದ್ಯುತ್ ಅವಘಡದಿಂದ ನಗೋನ್ ಜಿಲ್ಲೆಯಲ್ಲಿ ಹಲವು ದಿನಗಳ ಕಾಲ ವಿದ್ಯುತ್ ಸಮಸ್ಯೆ ಉಂಟಾಗಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.