ತೈಲ ಬೆಲೆ ಸತತ ಏರಿಕೆ... ನಿರ್ಮಲಾ ಸೀತಾರಾಮನ್ ಹೇಳಿದ್ದೇನು..? - ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ
ಚೆನ್ನೈ: ದೇಶದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದು, ಇದೇ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ. ತೈಲ ಬೆಲೆ ಏರಿಕೆ ವಿಪರೀತ ಸಮಸ್ಯೆಯಾಗಿದ್ದು, ಇದರಲ್ಲಿ ಇಂಧನ ಬೆಲೆ ಕುಸಿತ ಹೊರತುಪಡಿಸಿ ಯಾವುದೇ ಉತ್ತರ ನೀಡಿದ್ರೂ ಮನವರಿಕೆಯಾಗಲ್ಲ. ಚಿಲ್ಲರೆ ಇಂಧನ ಬೆಲೆಯನ್ನ ಗ್ರಾಹಕರಿಗೆ ಸಮಂಜಸವಾದ ಮಟ್ಟದಲ್ಲಿ ಇಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತನಾಡಬೇಕು ಎಂದಿದ್ದಾರೆ.