ಕಡಲು ಸೇರಿದ ಅಳಿವಿನಂಚಿನ 'ಆಲಿವ್ ರೆಡ್ಲಿ' ಕಡಲಾಮೆ ಮರಿಗಳು... ವಿಡಿಯೋ
ಕೊಲ್ಲಂ (ಕೇರಳ): ಅಳಿವಿನಂಚಿನಲ್ಲಿರುವ "ಆಲಿವ್ ರೆಡ್ಲಿ" ಜಾತಿಗೆ ಸೇರಿರುವ ಕಡಲಾಮೆಯ ಮೊಟ್ಟೆಗಳು ಕಳೆದ 52 ದಿನಗಳ ಹಿಂದೆ ಕೊಲ್ಲಂ ಜಿಲ್ಲೆಯ ಪೋಜಿಕ್ಕರ ಕಡಲ ತೀರದ ಬಳಿ ಪತ್ತೆಯಾಗಿದ್ದವು. ತಿರುವನಂತಪುರಂ ಮೂಲದ ತಿರುವಾಂಕೂರು ನೇಚರ್ ಹಿಸ್ಟರಿ ಸೊಸೈಟಿ ಈ ಮೊಟ್ಟೆಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ಕೃತಕವಾಗಿ ಕಾವು ನೀಡಲಾಗಿತ್ತು. ಇದೀಗ, ಮೊಟ್ಟೆಗಳಿಂದ ಆಮೆ ಮರಿಗಳು ಹೊರ ಬಂದಿದ್ದು, ಸುರಕ್ಷಿತವಾಗಿ ಕಡಲಿಗೆ ಬಿಡಲಾಗಿದೆ.