ಹೀಗಿದೆ ಪಂಜಾಬ್ ರೈತರ ಹೋರಾಟ... ಇದು ರೈತರ ಸೇನೆಯ ವಿಡಿಯೋ!! - ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಇನ್ನೊಂದೆಡೆ ದೆಹಲಿಯ ಬಹದ್ದೂರ್ ಹೆದ್ದಾರಿಯ ಟಿಕ್ರಿ ಗಡಿಯಲ್ಲಿ ಅನಗತ್ಯವಾಗಿ ಟ್ರಕ್ಗಳು ಪ್ರವೇಶಿಸುತ್ತಿದ್ದು, ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆ ದೆಹಲಿ ಗಡಿ ಪ್ರವೇಶಿಸಿದ ಟ್ರಕ್ವೊಂದನ್ನು ರೈತರು ಟ್ರ್ಯಾಕ್ಟರ್ ಬಳಸಿ ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.