ಕೃಷಿ ಮಸೂದೆ ವಿರುದ್ಧ ಮಹಾರಾಷ್ಟ್ರದಲ್ಲಿ ರೈತರ ಬೃಹತ್ ರ‍್ಯಾಲಿ - ಕೃಷಿ ಮಸೂದೆ ವಿರುದ್ಧ ಮಹಾರಾಷ್ಟ್ರದಲ್ಲಿ ರೈತರ ಬೃಹತ್ ರ್ಯಾಲಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯು ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ನಡೆಯುತ್ತಿದ್ದು, ಸಾವಿರಾರು ರೈತಪರ ಹೋರಾಟಗಾರರು ಭಾಗಿಯಾಗಿದ್ದಾರೆ. ರೈತರು ನಾಸಿಕ್ನಿಂದ ಮುಂಬೈ ಕಡೆಗೆ ಮೆರವಣಿಗೆ ನಡೆಸಿದ್ದು, ಕಸರಾ ಘಾಟ್ನಲ್ಲಿ ಹಾದು ಹೋದ ರ‍್ಯಾಲಿಯ ದೃಶ್ಯ ಹೀಗಿದೆ.