ಗುರುನಾನಕ್ ಜಯಂತಿ:ಪ್ರತಿಭಟನೆ ನಡುವೆಯೇ ಟಿಕ್ರಿ ಗಡಿಯಲ್ಲಿ ರೈತರಿಂದ ಪ್ರಾರ್ಥನೆ - ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅವರ 551ನೇ ಜನ್ಮ ದಿನಾಚರಣೆ
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ 'ದೆಹಲಿ ಚಲೋ' ಪ್ರತಿಭಟನೆ ಇಂದೂ ಕೂಡ ಮುಂದುವರೆದಿದೆ. ಇಂದು ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅವರ 551ನೇ ಜನ್ಮ ದಿನಾಚರಣೆ ಹಿನ್ನೆಲೆ ಪ್ರತಿಭಟನೆ ನಡುವೆಯೇ ರೈತರು ಟಿಕ್ರಿ ಗಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.