ವಿಡಿಯೋ: ಹರಿಯಾಣದಲ್ಲಿ ತೀವ್ರಗೊಂಡ ರೈತರ ಹೋರಾಟ, ಗ್ರಾಮಸ್ಥರು-ರೈತರ ಮುಖಾಮುಖಿ - ಗ್ರಾಮಸ್ಥರು- ರೈತರ ಮುಖಾಮುಖಿ, ಬೆಚ್ಚಿ ಬೀಳಿಸೋ ವಿಡಿಯೋ
ಕರ್ನಾಲ್: ಘರೌಂಡಾ ವಿಧಾನಸಭಾ ಕ್ಷೇತ್ರದ ಕೈಮ್ಲಾ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ರೈತರು ಮುಖಾಮುಖಿಯಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿನ ರೈತರ ವಿರೋಧದಿಂದಾಗಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಭೇಟಿಯನ್ನು ರದ್ದುಪಡಿಸಲಾಗಿದೆ. ಇನ್ನು ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದ ವೇದಿಕೆಗೆ ಪ್ರತಿಭಟನಾನಿರತ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ.