ಬಡ ವಿದ್ಯಾರ್ಥಿಗಳಿಗೆ IAS ಓದಿಸುತ್ತಿರುವ ಸೋನು ಸೂದ್: ಈಟಿವಿ ಭಾರತ ವಿಶೇಷ ಸಂದರ್ಶನದಲ್ಲಿ ರಿಯಲ್ ಹೀರೋ - ಬಾಲಿವುಡ್ ನಟ ಸೋನು ಸೂದ್
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳ ಮೂಲಕವೇ ಜನಮಾನಸದಲ್ಲಿ ಜಾಗ ಪಡೆದಿರುವ ಬಾಲಿವುಡ್ ನಟ ಸೋನು ಸೂದ್, ತಮ್ಮ ಸೇವಾ ಕಾರ್ಯಗಳ ಕುರಿತು ಮನದಾಳದ ಮಾತುಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡರು. ತಮ್ಮ ಮಾನವೀಯ ಕಾರ್ಯಗಳು ಪ್ರಾರಂಭವಾಗಿದ್ದು ಹೇಗೆ, ಈಗ ಹೇಗೆ ನಡೆಯುತ್ತಿದೆ, ಇವೆಲ್ಲದಕ್ಕೂ ಹಣ ಎಲ್ಲಿಂದ ಬರುತ್ತಿದ.. ಹೀಗೆ ಎಲ್ಲಾ ಮಾಹಿತಿಯನ್ನು ಸೋನು ಬಿಚ್ಚಿಟ್ಟರು. ಒಳ್ಳೆಯ ಕಾರ್ಯ ಮಾಡುವಾಗ ಕೆಲವೊಂದು ಕೊಂಕು ನುಡಿಗಳು ಬಂದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವ ಸೋನು, ನಟಿ ಕಂಗನಾ ರಣಾವತ್ ಅವರ ಆಕ್ಷೇಪಾರ್ಹ ಟ್ವೀಟ್ಗಳ ಬಗ್ಗೆಯೂ ಪ್ರತಿಕ್ರಿಯಿಸಿದರು. ಅಲ್ಲದೆ, ತಮ್ಮ ಮುಂದಿನ ಚಿತ್ರಗಳು, ತಾನು ವಿದ್ಯಾರ್ಥಿ ವೇತನ ನೀಡಿ ಬಡ ಪ್ರತಿಭೆಗಳಿಗೆ ಐಎಎಸ್ ಓದಿಸುತ್ತಿರುವ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಸೋನು ಸೂದ್ ಜೊತೆಗಿನ ಎಕ್ಸ್ಕ್ಲ್ಯೂಸಿವ್ ಸಂದರ್ಶನ ಇಲ್ಲಿದೆ.