ಕರ್ನಾಟಕ

karnataka

ETV Bharat / videos

ಯುರೋಪ್‌ ಸಂಸದರನ್ನು ಸರ್ಕಾರದ ಪರ ಮಾತನಾಡಲು ಆಹ್ವಾನಿಸಿರಬಹುದು: ಚಿದು ಆರೋಪ - ಕಾಂಗ್ರೆಸ್​ ನಾಯಕ ಪಿ ಚಿದಂಬರಂ

By

Published : Oct 30, 2019, 7:28 PM IST

ಬಹುಕೋಟಿ ಐಎನ್‌ಎಕ್ಸ್‌ ಮೀಡಿಯಾ ಹಗರಣ ಸಂಬಂಧ ಕಾಂಗ್ರೆಸ್​ ನಾಯಕ ಪಿ ಚಿದಂಬರಂ ಅವರಿಗೆ ನವೆಂಬರ್​ 13ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ತಿಹಾರ್​ ಜೈಲಿಗೆ ಚಿದಂಬರಂ ಅವರನ್ನು ಕರೆದೊಯ್ಯುತ್ತಿರುವಾಗ ಯುರೋಪ್‌ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿರುವುದರ ಬಗ್ಗೆ ಚಿದು ಪ್ರತಿಕ್ರಿಯೆ ನೀಡಿದ್ದಾರೆ. ಯುರೋಪ್‌ ಸಂಸದರನ್ನು ಸಂಸತ್ತಿಗೆ ಬಂದು ಸರ್ಕಾರದ ಪರವಾಗಿ ಮಾತನಾಡುವಂತೆ ಆಮಂತ್ರಣ ನೀಡಿರಬಹುದು. ಯಾರಿಗೆ ಗೊತ್ತು? ಈ ರೀತಿಯೂ ನಡೆಯಬಹುದು ಎಂದು ಕೇಂದ್ರದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ್ದಾರೆ.

ABOUT THE AUTHOR

...view details