2008ರ ದೆಹಲಿ ಸರಣಿ ಬಾಂಬ್ ಸ್ಫೋಟಕ್ಕೆ 12 ವರ್ಷ: ಈಟಿವಿ ಭಾರತದ ಸಂಕ್ಷಿಪ್ತ ವರದಿ - ದೆಹಲಿ ಸರಣಿ ಬಾಂಬ್ ಸ್ಫೋಟ
21 ಜನರನ್ನು ಬಲಿ ಪಡೆದು, 100ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದ ದೆಹಲಿ ಸರಣಿ ಬಾಂಬ್ ಸ್ಫೋಟ ನಡೆದು ಇಂದಿಗೆ 12 ವರ್ಷಗಳು ಸಂದಿವೆ. 2008ರ ಸೆ.13 ರಂದು ದೆಹಲಿಯ ಕರೋಲ್ ಬಾಗ್, ಗ್ರೇಟರ್ ಕೈಲಾಶ್, ಕೊನಾಟ್ ಪ್ಲೇಸ್ ಪ್ರದೇಶದಲ್ಲಿ ಇಂಡಿಯನ್ ಮುಜಾಹಿದ್ದೀನ್ (ಐಎಂ) ಭಯೋತ್ಪಾದಕ ಸಂಘಟನೆ ನಡೆಸಿದ ಬಾಂಬ್ ಸ್ಫೋಟಕ್ಕೆ ರಾಷ್ಟ್ರ ರಾಜಧಾನಿ ನಡುಗಿತ್ತು. ಈ ಕುರಿತು ಈಟಿವಿ ಭಾರತದ ಸಂಕ್ಷಿಪ್ತ ವರದಿ ಇಲ್ಲಿದೆ.