ಈಟಿವಿ ಸಂಸ್ಥೆಯಿಂದ ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್: ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ' - ರಾಮೋಜಿ ರಾವ್,
ಹೈದರಾಬಾದ್ ಮೂಲದ ಈ ಜನಜನಿತ ಮಾಧ್ಯಮ ಸಂಸ್ಥೆಯ ಯಶಸ್ಸಿಗೆ ಈಗ ಮತ್ತೊಂದು ಗರಿ ಮೂಡಿದೆ. ಮಕ್ಕಳ ಕಾರ್ಟೂನ್ ವಾಹಿನಿ ನಿಮ್ಮ ಮನೆಗೇ ಬಂದಿದೆ. ರಜಾ ದಿನಗಳಲ್ಲಿ ಬೇಸರ ಆಗಬಾರದು ಎಂಬ ಉದ್ದೇಶದಿಂದ 'ಈಟಿವಿ ಬಾಲ ಭಾರತ' ಮಕ್ಕಳನ್ನು ರಂಜಿಸಲು ಇಂದಿನಿಂದ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಈ ಚಾನಲ್ ಮನರಂಜನೆಯ ಜೊತೆಗೆ ಜ್ಞಾನವನ್ನೂ ಪಸರಿಸಲಿದೆ. ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ 'ಈಟಿವಿ ಬಾಲ ಭಾರತ' ವಾಹಿನಿಗಳು ಏಕಕಾಲಕ್ಕೆ ಲೋಕಾರ್ಪಣೆಯಾಗಿವೆ.