ರಾಂಚಿ: 30 ಅಡಿ ಆಳದ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಆನೆ ರಕ್ಷಣೆ- VIDEO - ಜೆಸಿಬಿ ಮೂಲಕ ಆಗಮಿಸಿದ ಸಿಬ್ಬಂದಿ
ಜಾರ್ಖಂಡ್ (ರಾಂಚಿ): ಇಲ್ಲಿನ ಲಾಪುಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಕ್ತಾ ಗ್ರಾಮದಲ್ಲಿ 25ರಿಂದ 30 ಅಡಿ ಆಳದ ಬಾವಿಗೆ ಬಿದ್ದಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಆಹಾರ ಅರಸಿ ಬಂದಾಗ ಆನೆ ಬಾವಿಯೊಳಗೆ ಬಿದ್ದಿದೆ. ತಕ್ಷಣ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಜೆಸಿಬಿ ಮೂಲಕ ಆಗಮಿಸಿದ ಸಿಬ್ಬಂದಿ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಿಸಲಾಗಿದೆ. ಬಾವಿಯಿಂದ ಮೇಲೆ ಬಂದ ಮೇಲೆ ಗಜರಾಜ ಓಟಕ್ಕೆ ಇಟ್ಟ ದೃಶ್ಯ ನೋಡುವಂತಿದೆ.