ನೀಲಗಿರಿ ಬೆಟ್ಟದಲ್ಲಿ ಗಜರಾಜನ ಮೇಲೆ ತೋಳಗಳ ಆಟೋಟ... ಸಿಟ್ಟಿಗೆದ್ದ ಆನೆ ಮಾಡಿದ್ದೇನು? ವಿಡಿಯೋ - ತಮಿಳುನಾಡಿನಲ್ಲಿ ಆನೆಯನ್ನು ಬೆನ್ನಟ್ಟಿದ ತೋಳಗಳು
ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ಅಡಗಿರುವ ಮುದುಮಲೈ ರಾಷ್ಟ್ರೀಯ ಉದ್ಯಾನಕ್ಕೆ ದಿನನಿತ್ಯ ಸಾವಿರಾರೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆ ಕಾಡಿನ ಸೌಂದರ್ಯವನ್ನು ಸವಿಯುತ್ತಲೇ ಪ್ರವಾಸಿಗರು ವನ್ಯ ಜೀವಿಗಳನ್ನು ವೀಕ್ಷಿಸುತ್ತಾರೆ. ಆ ಅಭಯಾರಣ್ಯದಲ್ಲಿ ಸುಮಾರು 900ಕ್ಕೂ ಹೆಚ್ಚು ಆನೆಗಳಿದ್ದು, ಅವುಗಳೊಂದಿಗೆ ತೋಳ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳು ವಾಸಿಸುತ್ತವೆ. ಇನ್ನು ಪ್ರಾಣಿಗಳ ಚೇಷ್ಠೆ ಆಟವನ್ನು ಪ್ರವಾಸಿಗರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ತೋಳಗಳ ಗುಂಪೊಂದು ಗಜರಾಜನಿಗೆ ಕಾಡಿಸಿವೆ. ಆದ್ರೆ ಗಜರಾಜ ತನ್ನ ಸೊಂಡಿಲಿನಿಂದ ತೋಳಗಳಿಗೆ ತಕ್ಕ ಶಾಸ್ತಿಯನ್ನೇ ಮಾಡಿದೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.