ಅಂಫಾನ್ ಎಫೆಕ್ಟ್; ಮರಬಿದ್ದು ವಿದ್ಯುತ್ ಕಂಬದಲ್ಲಿ ಭಾರಿ ಬೆಂಕಿ- ವಿಡಿಯೋ - ಕೋಲ್ಕತ್ತ
ಪಶ್ಚಿಮ ಬಂಗಾಳಕ್ಕೆ ಅಂಫಾನ್ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಭಾರಿ ಬಿರುಗಾಳಿಯಿಂದ ಕೋಲ್ಕತ್ತಾದ ಪ್ರಿನ್ಸ್ ಅನ್ವರ್ ಶಾ ರಸ್ತೆಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು, ಎರಡು ತಂತಿಗಳು ಒಂದಕ್ಕೊಂದು ತಾಗಿ ಬೆಂಕಿ ಹೊತ್ತಿ ಉರಿದಿದೆ. ಸ್ಥಳೀಯರೊಬ್ಬರು ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ.