ಪಕ್ಕದ ರಾಜ್ಯದಲ್ಲಿ 10 ನಿಮಿಷದಲ್ಲಿ ಮೂರು ಬಾರಿ ಕಂಪಿಸಿದ ಭೂಮಿ...! - earthquake in suryapet district again today,
ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಚಿಂತಲಪಾಲೆಂ ತಾಲೂಕಿನ ಪಾತ ವೆಲ್ಲಟೂರ್ ಗ್ರಾಮದ ಸಮೀಪ ಭೂಮಿ ಕಂಪಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸಂಜೆ 10 ನಿಮಿಷದ ಅಂತರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ. ಭೂಮಿ ಕಂಪಿಸಿರುವುದರಿಂದ ಸ್ಥಳೀಯರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ. ಚಿಂತಲಪಾಲೆಂ ತಾಲೂಕಿನ ಕೇಂದ್ರದಲ್ಲಿ ಸುಮಾರು ಮೂರು ತಿಂಗಳಿನಿಂದ ಸಂಭವಿಸುತ್ತಿರುವ ಭೂಕಂಪಕ್ಕೆ ಮನೆಯ ಗೊಡೆಗಳು ಬಿರುಕು ಬಿಟ್ಟಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸುಮಾರು ನಾಲ್ಕು ಸೆಕೆಂಡ್ ಭೂಮಿ ಕಂಪಿಸಿದ್ದು, ಆ ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.1 ದಾಖಲಾಗಿದೆ.