WATCH: ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮ - ಭೂಕಂಪನ ಅಪ್ಡೇಟ್ಸ್
ಅಸ್ಸಾಂ: ಮನೆಯ ಮೇಲ್ಛಾವಣಿ ಕುಸಿದು ಧಾರಾಕಾರವಾಗಿ ಸುರಿಯುತ್ತಿರುವ ನೀರು, ಭಯಭೀತರಾಗಿ ಮನೆಗಳಿಂದ ಹೊರಗಡೆ ಓಡಿ ಬಂದು ರಸ್ತೆಯಲ್ಲಿ ನಿಂತಿರುವ ಜನರು, ಕಟ್ಟಡವೊಂದು ಇನ್ನೊಂದು ಕಟ್ಟಡಕ್ಕೆ ತಾಗಿ ನಿಂತಿರುವುದು, ಕಟ್ಟಡದೊಳಗೆ ಗಾಜು ಪುಡಿ-ಪುಡಿಯಾಗಿ ಬಿದ್ದಿರುವುದು, ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡ... ಇವೆಲ್ಲಾ ದೇಶದ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೂಕಂಪನದ ಪರಿಣಾಮ. ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಇದರ ಪರಿಣಾಮ, ಅಸ್ಸಾಂ ಮಾತ್ರವಲ್ಲ ಇಡೀ ಈಶಾನ್ಯ ರಾಜ್ಯದ ಜನರಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ..