ಸ್ಮಶಾನದಲ್ಲಿ ಜಾಗವಿಲ್ಲದೇ ಪಾರ್ಕಿಂಗ್ ಸ್ಥಳದಲ್ಲಿ ಅಂತ್ಯಕ್ರಿಯೆ: ವಿಡಿಯೋ - ವಾಹನ ಪಾರ್ಕಿಂಗ್ ಸ್ಥಳದಲ್ಲಿ ಅಂತ್ಯಸಂಸ್ಕಾರ
ಗುರುಗ್ರಾಮ್ (ಹರಿಯಾಣ): ಗುರುಗ್ರಾಮ್ ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಅಂತ್ಯಕ್ರಿಯೆ ನಡೆಸಲು ಸ್ಮಶಾನದಲ್ಲಿ ಜಾಗವೇ ಸಾಲದ ಪರಿಸ್ಥಿತಿ ಎದುರಾಗಿದೆ. ಭಾನುವಾರ ಕೋವಿಡ್ ರೋಗಿಗಳ ಮೃತದೇಹಗಳೂ ಸೇರಿದಂತೆ ಒಟ್ಟು 52 ಶವಗಳನ್ನು ಜಿಲ್ಲೆಯ ಸ್ಮಶಾನವೊಂದಕ್ಕೆ ತರಲಾಗಿದ್ದು, 12ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಸಂಸ್ಕಾರವನ್ನು ಶವಾಗಾರದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನೆರವೇರಿಸಲಾಗಿದೆ.