ನನ್ನ ತಂದೆ ಸಾವಿನ ಬಗ್ಗೆ ವದಂತಿ ಹರಡಬೇಡಿ: ಸುದ್ದಿಗೋಷ್ಠಿಯಲ್ಲಿ ಕೈಮುಗಿದು ಚರಣ್ ಮನವಿ! - ಎಸ್ಪಿಬಿ ಆಸ್ಪತ್ರೆ ಬಿಲ್ ವದಂತಿ
ಚೆನ್ನೈ: ಎಸ್.ಪಿ ಬಾಲಸುಬ್ರಹ್ಮಣ್ಯಂ ಸಾವು ಹಾಗೂ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಬಗ್ಗೆ ವದಂತಿ ಹರಡುತ್ತಿದ್ದಂತೆ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಮಗ ಎಸ್.ಪಿ ಚರಣ್ ತದನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ನಮ್ಮ ಕುಟುಂಬ ಇನ್ನೂ ದುಃಖದ ಸ್ಥಿತಿಯಲ್ಲಿದೆ. ಆಸ್ಪತ್ರೆಗೆ ದಾಖಲು ಮತ್ತು ನಿಧನದ ಬಗ್ಗೆ ಯಾವುದೇ ವದಂತಿ ಹರಡಬೇಡಿ, ಅದನ್ನ ನಿಲ್ಲಿಸುವಂತೆ ಕೈಮುಗಿದು ಮನವಿ ಮಾಡಿದ್ದಾರೆ.