'ಪ್ರಾಣಕ್ಕಿಂತ ಕರ್ತವ್ಯ ಹೆಚ್ಚು', ಚೀನಾದಲ್ಲಿ ಭಾರತೀಯ ವೈದ್ಯ ದಂಪತಿಯ ಮಾನವೀಯತೆ
ರತ್ಲಾಂ(ಮಧ್ಯ ಪ್ರದೇಶ): ಮಾರಕ ಕೊರೊನಾ ವೈರಸ್ ಭೀತಿಯಿಂದಾಗಿ ನೂರಾರು ಭಾರತೀಯರು ಚೀನಾದಿಂದ ತಾಯ್ನಾಡಿಗೆ ಮರಳಿದ್ದಾರೆ. ಆದ್ರೆ ಮಧ್ಯಪ್ರದೇಶದ ರತ್ಲಾಂನ ವೈದ್ಯ ದಂಪತಿ ಮಾತ್ರ ವೈರಸ್ನಿಂದ ಬಳಲುತ್ತಿರುವ ರೋಗಿಗಳ ಸೇವೆ ಮಾಡುವ ಉದ್ದೇಶದಿಂದ ಅಲ್ಲೇ ಉಳಿದಿದ್ದಾರೆ. ರತ್ಲಾಂ ಮೂಲದ ವೈದ್ಯರಾದ ಅಮಿಶ್ ವ್ಯಾಸ್ ಹಾಗೂ ಅವರ ಪತ್ನಿ ಚೀನಾದ ಹೌಗಾಂಜೋ ನಗರದಲ್ಲೇ ಉಳಿದು ಮಾರಕ ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ಇತ್ತ ರತ್ಲಾಂನಲ್ಲಿ ವೈದ್ಯರ ತಾಯಿ ಸೇರಿದಂತೆ ಸಂಪೂರ್ಣ ಕುಟುಂಬವೇ ಆತಂಕಕ್ಕೊಳಗಾಗಿದ್ದು, ದೇಶಕ್ಕೆ ಮರಳುವಂತೆ ಅಮಿಶ್ ಅವರಿಗೆ ಕರೆ ಮಾಡುತ್ತಿದ್ದಾರೆ. ಆದರೆ ನನಗೆ ರೋಗಿಗಳ ಸೇವೆ ಮಾಡಬೇಕೆಂದು ಅಮಿಶ್ ಅಲ್ಲೇ ಉಳಿದು ಅಲ್ಲಿನ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಆತಂಕದಲ್ಲಿದ್ದರೂ, ತಮ್ಮ ಮಗನ ದಿಟ್ಟ ನಿರ್ಧಾರದ ಬಗ್ಗೆ ಇಡೀ ಕುಟುಂಬವೇ ಹೆಮ್ಮೆ ಪಡುತ್ತಿದೆ.
Last Updated : Feb 11, 2020, 4:10 PM IST