ಕೊರೊನಾ ನಿಯಮ ಧಿಕ್ಕರಿಸಿ ಡಿಎಂಕೆ ಕಾರ್ಯಕರ್ತರ ಕುಣಿತ, ಪಟಾಕಿ ಸಿಡಿಸಿ ಸಂಭ್ರಮ... ವಿಡಿಯೋ - ಚುನಾವಣಾ ಫಲಿತಾಂಶ ಇಂದು ಲೈವ್
ಚೆನ್ನೈ: ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆ ಫಲಿತಾಂಶದ ಬಳಿಕ ಗೆದ್ದ ಅಭ್ಯರ್ಥಿಗಳು ಗುಂಪುಗೂಡಿ ಸಂಭ್ರಮಾಚರಣೆ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಚೆನ್ನೈನಲ್ಲಿ ಪಕ್ಷದ ಪ್ರಧಾನ ಕಚೇರಿ ಎದುರು ಡಿಎಂಕೆ ಕಾರ್ಯಕರ್ತರ, ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ. ತಮ್ಮ ನಾಯಕ ಮುನ್ನಡೆ ಸಾಧಿಸುತ್ತಿದ್ದಂತೆ ಚುನಾವಣಾ ಆಯೋಗದ ಆದೇಶ ಗಾಳಿಗೆ ತೂರಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
Last Updated : May 2, 2021, 1:00 PM IST