ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನನ್ನು ರಕ್ಷಿಸಿದ ಅಧಿಕಾರಿ - ವೃದ್ಧೆಯನ್ನು ರಕ್ಷಿಸಿದ ಅಧಿಕಾರಿ
ಮೋತಿಹಾರಿ (ಬಿಹಾರ): ಪೂರ್ವ ಚಂಪಾರಣ್ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸಂಗ್ರಾಂಪುರ ಬ್ಲಾಕ್ನ ಭವಾನಿಪುರದಲ್ಲಿ ಡಿಎಂ ಒಬ್ಬರು ಮುಳುಗುತ್ತಿದ್ದ ವೃದ್ಧನನ್ನು ಸ್ವತಃ ರಕ್ಷಿಸಿದ್ದಾರೆ. ಡಿಎಂ ಶೀರ್ಷಿತ್ ಕಪಿಲ್ ಅಶೋಕ್ ತಮ್ಮ ಮೋಟಾರು ದೋಣಿಯಲ್ಲಿ ಮುಳುಗುತ್ತಿದ್ದ ವೃದ್ಧನ ಪ್ರಾಣ ಉಳಿಸಿದ್ದಾರೆ. ವೃದ್ಧ ಸ್ವಲ್ಪ ಸಮಯದವರೆಗೆ ನೀರಿನ ಪ್ರವಾಹದಲ್ಲಿ ನಿಂತು ಮರವನ್ನು ಆಧಾರಕ್ಕಾಗಿ ಹಿಡಿದು ನಿಂತಿದ್ದರು.