'ಸತ್ಯಕ್ಕೆ ಜಯ ಸಿಗಲಿದೆ'... ರಾಜಕೀಯ ಉದ್ದೇಶದಿಂದ ಡಿಕೆಶಿ ಹತ್ತಿಕ್ಕುವ ಯತ್ನ: ಡಿಕೆ ಸುರೇಶ್ - ಜಾರಿ ನಿರ್ದೇಶನಾಲಯ
ನವದೆಹಲಿ: ಸತ್ಯಕ್ಕೆ ಜಯ ಸಿಗಲಿದೆ. ರಾಜಕೀಯ ಕಾರಣವಿಟ್ಟುಕೊಂಡು, ಇಲ್ಲ ಸಲ್ಲದ ಆರೋಪ ಮಾಡಿ ಡಿಕೆಶಿ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಡಿಕೆ ಸುರೇಶ್ ಹೇಳಿದ್ರು. ಅಕ್ರಮ ಹಣ ವರ್ಗಾವಣೆ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ಎಲೆಕ್ಷನ್ ವೇಳೆ 800ಕೋಟಿ ಮೌಲ್ಯದ ಆಸ್ತಿ ಬಗ್ಗೆ ವಿವರ ಸಲ್ಲಿಕೆ ಮಾಡಿದ್ದೇವೆ. ಆದರೆ 317 ಖಾತೆಗಳಿಂದ ಹಣ ವರ್ಗಾವಣೆ ಆಗಿದೆ ಎಂದು ಇಡಿ ಹೇಳ್ತಿದ್ದು, ಅದರಲ್ಲಿರುವ ಹಣ ನಮಗೆ ನೀಡಲಿ. ರಾಜಕೀಯ ಹುನ್ನಾರದಿಂದ ಇಡಿ ಅಧಿಕಾರಿಗಳು ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದು, ನಮಗೆ ಖಂಡಿತ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.