ನಿತೀಶ್ ಜೀ ದೊಡ್ಡ ಮನಸು ಮಾಡಿ ತೇಜಸ್ವಿಗೆ ಸಿಎಂ ಹುದ್ದೆ ಬಿಟ್ಟುಕೊಡಲಿ: ದಿಗ್ವಿಜಯ್ ಸಿಂಗ್ - ಬಿಹಾರ ವಿಧಾನಸಭೆ ಚುನಾವಣೆ 2020
ಬೋಪಾಲ್: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 125 ಕ್ಷೇತ್ರ ಹಾಗೂ ಮಹಾಘಟಬಂಧನ್ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಮತ್ತೊಂದು ಅವಧಿಗೆ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತಗೊಂಡಿದ್ದು, ಇದೇ ವಿಷಯವಾಗಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಾತನಾಡಿದ್ದಾರೆ. ನಿತೀಶ್ ಜೀ ಅವರು ದೊಡ್ಡ ಮನಸು ಮಾಡಿ ಪೂರ್ಣ ಹೃದಯದಿಂದ ಮುಖ್ಯಮಂತ್ರಿ ಸ್ಥಾನವನ್ನ ತೇಜಸ್ವಿ ಯಾದವ್ಗೆ ಬಿಟ್ಟುಕೊಡಬೇಕು. ಜತೆಗೆ ಜೆಡಿಯು ಒಟ್ಟಿಗೆ ಸೇರಿ ಉಪ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದಿದ್ದಾರೆ.