ಸಿಂಘು ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಪತ್ರಕರ್ತ ಬಿಡುಗಡೆ - ಅರೆಕಾಲಿಕ ಪತ್ರಕರ್ತ ಮಂದೀಪ್ ಪುನಿಯಾ
ನವದೆಹಲಿ: ನಿನ್ನೆ ರಾತ್ರಿ ಸಿಂಘು ಗಡಿಯಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿ (ಎಸ್‌ಹೆಚ್‌ಒ)ಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಅರೆಕಾಲಿಕ ಪತ್ರಕರ್ತ ಮಂದೀಪ್ ಪುನಿಯಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಇದೀಗ ಮಂದೀಪ್ ಪುನಿಯಾರನ್ನು ಬಿಡುಗಡೆ ಮಾಡಲಾಗಿದೆ. ಪುನಿಯಾರನ್ನು ಪೊಲೀಸರು ಎಳೆದೊಯ್ಯುತ್ತಿರುವ ವಿಡಿಯೋ ವ್ಯಾಪಕ ಖಂಡನೆಗೆ ಗುರಿಯಾಗಿತ್ತು.