ರಾಷ್ಟ್ರ ರಾಜಧಾನಿಯನ್ನಾವರಿಸಿದ ದಟ್ಟ ಮಂಜು! - ನವದೆಹಲಿಯಲ್ಲಿ ಮಂಜು ಕವಿದ ವಾತಾವರಣ
ನವದೆಹಲಿ: ಹಲವಾರು ಪ್ರದೇಶಗಳಲ್ಲಿ ದಟ್ಟವಾದ ಮಂಜು ರಾಷ್ಟ್ರ ರಾಜಧಾನಿಯನ್ನು ಆವರಿಸಿದ್ದು, ಗೋಚರತೆ ಕಡಿಮೆಯಾಗಿದೆ. ಉತ್ತರ ಭಾರತದ ಕೆಲವು ಭಾಗಗಳು ತೀವ್ರ ಚಳಿಯಿದ್ದು, ಮನೆಯಿಂದ ಹೊರ ಬರಲು ಕಷ್ಟವಾಗುತ್ತಿದೆ. ಪಾಲಂ ಮತ್ತು ಸಫ್ದರ್ಜಂಗ್‌ನಲ್ಲಿ ಕ್ರಮವಾಗಿ 12.2 ಡಿಗ್ರಿ ಸೆಲ್ಸಿಯಸ್ ಮತ್ತು 11.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.