ಬಾನೆಟ್ ಮೇಲೆ ಪೊಲೀಸಪ್ಪನ ಹೊತ್ತೊಯ್ದು ಕಾರು ಚಾಲಕನ ದರ್ಪ - ಕಾರು ಚಾಲಕನ ದರ್ಪ
ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ತಡೆದ ಪೊಲೀಸ್ ಸಿಬ್ಬಂದಿಯನ್ನು ಚಾಲಕ ತನ್ನ ಕಾರಿನ ಬಾನೆಟ್ ಮೇಲೆಯೇ ಕೆಲವು ಮೀಟರ್ಗಳಷ್ಟು ದೂರ ತೆಗೆದುಕೊಂಡು ಹೋದ ಘಟನೆ ನವದೆಹಲಿಯ ಧೌಲಾ ಕುವಾನ್ ಎಂಬಲ್ಲಿ ನಡೆದಿದೆ. ಅಕ್ಟೋಬರ್ 12ರಂದು ಘಟನೆ ನಡೆದಿದ್ದು, ನಂತರ ಕಾರಿನ ಚಾಲಕನನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.