ಕರ್ನಾಟಕ

karnataka

ETV Bharat / videos

ಪೊಲೀಸರ ಮೇಲೆ ತಲ್ವಾರ್​ ಬೀಸಿದ ಪ್ರತಿಭಟನಾಕಾರ... ಪ್ರತ್ಯುತ್ತರ ನೀಡಿದ ಖಾಕಿ ಪಡೆ! - ಗಣರಾಜ್ಯೋತ್ಸವ ದಿನ ಹಿಂಸಾಚಾರ

By

Published : Jan 29, 2021, 3:10 PM IST

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಿಂಘು ಗಡಿಯಲ್ಲಿ ಮುಂದುವರೆದಿದೆ. ಇದರ ಮಧ್ಯೆ ಪ್ರತಿಭಟನಾಕಾರರನ್ನ ಪೊಲೀಸರು ಚದುರಿಸಲು ಮುಂದಾಗಿದ್ದ ವೇಳೆ ವ್ಯಕ್ತಿಯೋರ್ವ ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ತಲ್ವಾರ್​ ಬೀಸಿರುವ ಘಟನೆ ನಡೆದಿದೆ. ಇದಕ್ಕೆ ಸರಿಯಾಗಿ ಉತ್ತರ ನೀಡಿರುವ ಖಾಕಿ ಪಡೆ, ಆತನಿಗೆ ಸರಿಯಾಗಿ ಥಳಿಸಿದೆ. ಪ್ರತಿಭಟನಾಕಾರ ತಲ್ವಾರ್​ ಬೀಸಿರುವ ಪರಿಣಾಮ ಅಲಿಪುರ್​ ಎಸ್​ಎಚ್​ಒ ಪ್ರದೀಪ್​ ಪಲಿವಾಲ್​ ಗಾಯಗೊಂಡಿದ್ದಾರೆ. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​​ ಪರೇಡ್​ ಹಿಂಸಾಚಾರದಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details