ಗರ್ಭಿಣಿ ಕರೆಗೆ ದೆಹಲಿ ಪೊಲೀಸರ ಸ್ಪಂದನೆ: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ - ಕೊರೊನಾ ವೈರಸ್
ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ದೆಹಲಿ ಪೊಲೀಸರು ಮಾಹಿತಿ ತಿಳಿದ 20 ನಿಮಿಷದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾದರು. ಪೊಲೀಸರಿಗೆ ಫೋನ್ ಮಾಡುವುದಕ್ಕೂ ಮುಂಚಿತವಾಗಿ ಅನೇಕ ಸಹಾಯವಾಣಿಗಳಿಗೆ ಮಹಿಳೆಯ ಸಂಬಂಧಿಕರು ಕರೆ ಮಾಡಿದ್ದಾರೆ. ಆದರೆ ಯಾರೂ ಕೂಡಾ ಇವರ ಸಹಾಯಕ್ಕೆ ಮುಂದಾಗಲಿಲ್ಲ. ಆದರೆ ಪೊಲೀಸರು ಸುದ್ದಿ ತಿಳಿದ ತಕ್ಷಣ ಎಚ್ಚೆತ್ತುಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.